ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಗಳು ವೈಫೈ ಮೂಲಕ ಕರೆ ಮಾಡುವ ಸೌಲಭ್ಯ ವನ್ನು ಬಳಕೆದಾರರಿಗೆ ನೀಡಿದೆ. ಈ ಸೌಲಭ್ಯದ ದೊಡ್ಡ ಅನುಕೂಲತೆ ಎಂದರೆ ನೀವು ಸೆಲ್ಯುಲರ್ ಸಂಕೇತಗಳು ಕಡಿಮೆ ಇರುವ ಪ್ರದೇಶದಲ್ಲಿದ್ದು, ವೇಗವಾದ ವೈಫೈ ಇಂಟರ್ನೆಟ್ ಹೊಂದಿದ್ದರೆ, ಯಾವುದೇ ತೊಂದರೆಯಿಲ್ಲದೇ ನಿಮಗಿಷ್ಟ ಬಂದವರಿಗೆ ಕರೆಮಾಡಬಹುದು. ವಿವೋ ಫೋನ್ ನಲ್ಲಿ ವೈಫೈ ಕರೆ ಸೌಲಭ್ಯ ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ. ವೈಫೈ ಕಾಲಿಂಗ್ ಎಂದರೇನು? ಇದರ ವಿಶೇಷತೆಗಳೇನು? ವೈಫೈ ಬಳಸಿ ಕರೆ ಸ್ವೀಕರಿಸುವ ಮತ್ತು ಕರೆ ಮಾಡುವ ಸೌಲಭ್ಯವೇ ವೈಫೈ ಕಾಲಿಂಗ್. ಸಿಗ್ನಲ್ ತೊಂದರೆಯಿರುವಲ್ಲಿಯೂ ವೈಫೈ ಬಳಸಿ ಕರೆ ಮಾಡಬಹುದು ಮತ್ತು ಸ್ವೀಕರಿಸಬಹುದು. ವಿವೊ ಸ್ಮಾರ್ಟ್ಫೋನ್ ಗಳಲ್ಲಿ ಸದ್ಯಕ್ಕೆ ಏರ್ಟೆಲ್ ವೈಫೈ ಕಾಲಿಂಗ್ ಸೌಲಭ್ಯವು ಲಭ್ಯವಿಲ್ಲ. ಆದರೆ, ನೀವು ರಿಲೈನ್ಸ್ನವರ ಜಿಯೋ ಬಳಕೆದಾರರಾಗಿದ್ದಲ್ಲಿ ಈ ಸೌಲಭ್ಯವನ್ನು ವಿವೋ ಸ್ಮಾರ್ಟ್ಫೋನ್ ಅಲ್ಲಿ ಬಳಸಬಹುದು. ವೈಫೈ ಕಾಲಿಂಗ್ ಅನ್ನು ವಿವೋ ಫೋನ್ ಅಲ್ಲಿ ಸಕ್ರಿಯಗೊಳಿಸುವ ವಿಧಾನವನ್ನು ನೋಡೋಣ. ವಿವೋ ಸ್ಮಾರ್ಟ್ಫೋನ್ ಅಲ್ಲಿ ವೈಫೈ ಕಾಲ್ ಮಾಡುವುದು ಹೇಗೆ ? ನಿಮ್ಮ ವಿವೋ ಫೋನ...